Monday, March 31, 2008

~ದ್ವಂದ್ವ~

ರೌದ್ರ ತಾಂಡವದ ಭೈರವನಲ್ಲೇ

ಶಾಂತ ಯೋಗಿಯ ತಾಪಸ ಗುಣ...

ಬಂಡೆಯನ್ನೇ ಕರಗಿಸಬಲ್ಲ ದೈತ್ಯ ಅಲೆಗೆ

ಕ್ಷಣಾರ್ಧದಲ್ಲೇ ಹಿಂಜರಿಕೆಯ ಹಿನ್ನೆಡೆಯ ಬಯಕೆ...

ಗುಡುಗು ಸಿಡಿಲುಗಳಿಂದ ಬೆದರಿಸಿ ಅಬ್ಬರಿಸುವ ಆಗಸ

ಕಣ್ಣೀರ ಮಳೆಗರೆದು ಕರಗದೆ?

ದ್ವಂದ್ವ ಎಲ್ಲೆಲ್ಲೂ ಇದೆ...ಶಿವನೇನು ಅಲೆಯೇನು

ನಾನೇನು ನೀವೇನು ಹೊರತೆ?