Thursday, June 28, 2007

ಬಳಸಿ - ಉಳಿಸಿ - ಬೆಳೆಸಿ

ಕನ್ನಡ ಬಳಸಿ-ಉಳಿಸಿ
ಅಂತ ಅದೆಷ್ಟು ಚಳುವಳಿ!
ಹಾಗೆ ಸದ್ದು ಮಾಡದೆ ಬಳಸಿ-ಉಳಿಸಿದಷ್ಟೇ
ನಾವು ಬೆಳೆಸಿದ್ದೆಷ್ಟು ನೀವೇ ನೋಡಿ -

School ಇಸ್ಕೂಲ್ಲಾಗಿ,
Master ಮಾಸ್ತರರಾಗಿ,
Fees ಫೀಜಾಗಿ, ತದ್ಭವವಾದ್ದು
ಹಳೆಯ ವಿಷಯ ಬಿಡಿ...

ಆದರೆ ಪೋರಾಪೊಟಾಣಿ,
ಅರ್ಗೆಂಟು - aka ಗೆಂಟು,
ಸೆಪ್-ಸೆಪರೇಟು
ಇವೆಲ್ಲಾ ಏನು ಗೊತ್ತೇನ್ರಿ?

ಇವೆಲ್ಲಾ ಕಬ್ಬಿಣದ ಕಡ್ಲೆ ಇಂಗ್ಲಿಷಿನ
Power-of-attorney, arrogant, separate,
ಇವನ್ನೇ ಬಗ್ಗಿ, ಬಾಗಿಸಿ, ನಾದಿಸಿದಾಗ
ಅರಳಿದ ಕನ್ನಡ ಕುಸುಮ ಕಣ್ರೀ!

ಇನ್ನು ನಮ್ಮ head(ಹೆಡ್ಡು ?) ಮಾಸ್ತರರ ಬಾಯಿಗೆ ಸಿಕ್ಕಿ
machine~mission , apparatus~operators
asterisk~ostrich ಆಗಿದ್ದೆಲ್ಲಾ
ರೂಪಾಂತರವಲ್ಲ ಅವಾಂತರವಷ್ಟೇ ಬಿಡಿ!

Least ಮಾಡ್ತಾ ಹೋದ್ರೆ
ತುಂಬಾ ಇದೆ ಬಿಡಿ
Tame ಇಲ್ಲ ನೋಡಿ; ಇದ್ದಿದ್ರೆ
ಹರಟ ಬಹುದು ಇದೇನು ಮಹಾ ಬಿಡಿ!

2 comments:

SpoorthyMurali said...

My attempt at humour :-)

Nikhil said...

Chennagide!